ಆರೋಹಣ ಸಂಪಾತದ ರೇಖಾಂಶವು (ಇದನ್ನು Ω ಚಿಹ್ನೆಯಿಂದ ಸೂಚಿಸಲಾಗುತ್ತದೆ) ಖಗೋಳ ಕಕ್ಷಾ ಅಂಶಗಳಲ್ಲಿ ಒಂದು. ಅಂತರಿಕ್ಷದಲ್ಲಿ ಖಗೋಳಕಾಯಗಳ ಕಕ್ಷೆಗಳನ್ನು ಖಚಿತವಾಗಿ ನಿರೂಪಿಸಲು ಬಳಸಲಾಗುವ ಹಲವು ಅಂಶಗಳಲ್ಲಿ ಇದೂ ಒಂದು. ಸೂರ್ಯನನ್ನು ಪರಿಭ್ರಮಿಸುತ್ತಿರುವ ಒಂದು ಕಾಯದ ಈ ರೇಖಾಂಶವು ಮೇಷದ ಮೊದಲ ಬಿಂದು ಮತ್ತು ಆ ಕಾಯದ ಆರೋಹಣ ಸಂಪಾತಗಳು ಸೂರ್ಯನಲ್ಲಿ ನಿರ್ಮಿಸುವ ಕೋನಕ್ಕೆ ಸಮನಾಗಿರುತ್ತದೆ. ಈ ಅಳತೆಯನ್ನು ಕ್ರಾಂತಿವೃತ್ತದ ನಿರ್ದೇಶಕ ಸಮತಳದಲ್ಲಿ ಮಾಡಲಾಗುತ್ತದೆ. == ಸ್ಥಿತಿ ಸದಿಶಗಳಿಂದ ಲೆಕ್ಕಾಚಾರ == ಖಗೋಳಗತಿವಿಜ್ಞಾನದಲ್ಲಿ, ದೀರ್ಘವೃತ್ತೀಯ ಕಕ್ಷೆಗಳಿಗೆ, ಆರೋಹಣ ಸಂಪಾತದ ರೇಖಾಂಶ, ಅಥವಾ Ω {\ \ \,} ಪ್ರಮಾಣವು ನಿರ್ದೇಶಕ ದಿಕ್ಕು (ಉದಾ: ವಸಂತ ವಿಷುವದತ್ತ) ಮತ್ತು ಆರೋಹಣ ಸಂಪಾತಗಳ ನಡುವಣ ಕೋನಕ್ಕೆ ಸಮನಾಗಿರುತ್ತದೆ. ಇದನ್ನು ಕಕ್ಷೀಯ ಸ್ಥಿತಿ ಸದಿಶಗಳಿಂದ ಈ ರೀತಿ ಕಂಡುಹಿಡಿಯಬಹುದು: Ω = ⁡ | | {\ \ =\ {{n_{}} \ {\ {\|\|} }}} ( < 0 {\ n_{}<0\,} ಆದರೆ, Ω = 2 π − Ω {\ \ =2\ -\ \,} ಆಗುತ್ತದೆ) ಚಿಹ್ನೆಗಳು: {\ n_{}\,} ಪ್ರಮಾಣವು {\ \ {} } ಸದಿಶದ -ಅಂಶ, {\ \ {} } ಚಿಹ್ನೆಯು ಆರೋಹಣ ಸಂಪಾತದ ದಿಕ್ಕಿನಲ್ಲಿರುವ ಕಾರ್ಟೀಸಿಯನ್ ಸದಿಶ (ಅಂದರೆ, {\ \ {} } ಸದಿಶದ -ಅಂಶವು ಸೊನ್ನೆಯಾಗಿರುತ್ತದೆ). ಸಮಭಾಜಕೀಯ ಕಕ್ಷೆಗಳ (ಅಂದರೆ, ಈ ಕಕ್ಷೆಗಳ ಕಕ್ಷೀಯ ಓರೆಯು ಸೊನ್ನೆಯಾಗಿರುತ್ತದೆ) Ω {\ \ \,} ಪ್ರಮಾಣಕ್ಕೆ ಯಾವ ಅರ್ಥವೂ ಇಲ್ಲ. ಇವುಗಳನ್ನು ವ್ಯಾಖ್ಯಾನಿಸಲು ಅಸಾಧ್ಯ. ಹೀಗಾಗಿ, ಇವುಗಳ ಲೆಕ್ಕಾಚಾರದ ಸಮಯದಲ್ಲಿ ವಾಡಿಕೆಯಂತೆ ಈ ಪ್ರಮಾಣವನ್ನು ಸೊನ್ನೆಯೆಂದು ಪರಿಗಣಿಸಲಾಗುತ್ತದೆ: ಅಂದರೆ, ಆರೋಹಣ ಸಂಪಾತವನ್ನು -ಅಕ್ಷವು ವಸಂತ ವಿಷುವ ದಿಕ್ಕೆನೆಡೆಗಿದ್ದು, -ಅಕ್ಷವು ಮೇಲ್ದಿಕ್ಕಿನೆಡೆಗಿರುವ ಒಂದು ನಿರ್ದೇಶಕ ಚೌಕಟ್ಟಿನಲ್ಲಿ / | | = ( 1 , 0 , 0 ) {\ \ {} /\ {\|\|} =(1,0,0)} ಇಂದ ಬರುವ ನಿರ್ದೇಶಕ ದಿಕ್ಕಿಗೆ ಅಳವಡಿಸಲಾಗುತ್ತದೆ. == ಇವನ್ನೂ ನೋಡಿ == ವಸಂತ ವಿಷುವ ಆರೋಹಣ ಸಂಪಾತ